Âಕೇಸ್....ಮರುಬಿಡುಗಡೆ
- IndiaGlitz, [Tuesday,October 01 2013]
ಸಮಾಜ ಮುಖಿ ಸಿನೆಮಾ ಎಂದೇ ಬಿಂಬಿಸಲಾಗಿರುವ ಕೇಸ್ ನಂ 18/9Â ಕನ್ನಡ ಚಿತ್ರವನ್ನು ಕರ್ನಾಟಕ ರಾಜ್ಯದ ವಾರ್ತಾ ಮಂತ್ರಿ ಶ್ರೀ ಸಂತೋಷ್ ಲಾಡ್ ಅವರು ಕಳೆದ ಬಾನುವಾರ ರೇಣುಕಾಂಬ ಡಿಜಿಟಲ್ ಚಿತ್ರಮಂದಿರದಲ್ಲಿ ವೀಕ್ಷಿಸಿ ಅಪಾರವಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಸಿನೆಮಾ ಬರಬೇಕು. ಈ ರೀತಿಯ ಘಟನೆ ಮಾತ್ರ ನಮ್ಮ ಸಮಾಜದಲ್ಲಿ ಆಗಲೇ ಬಾರದು. ಸುಮಾರು ವರ್ಷಗಳ ನಂತರ ಸಿನೆಮಾ ನೋಡಿದ ನಾನು ಹೆಣ್ಣು ಮಕ್ಕಳ ಶೋಷಣೆ ಇರುವ ಈ ಚಿತ್ರ ನೋಡಿ ಮನಸ್ಸು ಬೇಸರಿಸುವುದು. ಇಂತಹ ಶೋಷಣೆ ನಿಲ್ಲಬೇಕು. ಚಿತ್ರವು ಅಂತ್ಯ ಬರುವ ಹೊತ್ತಿಗೆ ಮತ್ತೆ ಒಂದು ಜರ್ಕ್ ನೀಡಿ ತಪ್ಪು ಮಾಡಿದವರಿಗೆ ಒಳ್ಳೆಯ ತಿರ್ಪೆ ಸಿನೆಮಾದಲ್ಲಿ ನೀಡಲಾಗಿದೆ. ಇದು ರೀಮೇಕ್ ಆದರೂ ಒಳ್ಳೆಯ ಸಿನೆಮವೇ ಆಗಿದೆ. ನಾಯಕ ನಿರಂಜನ್ ಒಳ್ಳೆ ಭವಿಷ್ಯ ಇರುವ ನಟ ಎಂದು ವಾರ್ತ ಮಂತ್ರಿಗಳದ ಸಂತೋಷ್ ಲಾಡ್ ಅವರು ಸಂತೋಷ ವ್ಯಕ್ತ ಮಾಡಿರುವರು.ಅಂದಹಾಗೆ ಈ ಹಿಂದೆ ಕಿಚ್ಚ ಸುದೀಪ್ ಅವರು ಸಹ ಈ ಚಿತ್ರವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ವೀಕ್ಷಿಸಿ ಪ್ರಶಂಸೆಯ ಜೊತೆಗೆ ಈ ಚಿತ್ರವು ಮರು ಬಿಡುಗಡೆ ಮಾಡುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತ ಮಾಡಿದ್ದರು. ಅದಕ್ಕೆ ಕಾರಣ ಚಿತ್ರದಲ್ಲಿ ಇರುವ ಗುಣಾತ್ಮಕ ಅಂಶಗಳು.
ಯಾಕೆ ಇಂತಹ ಚಿತ್ರಕ್ಕೆ ಪ್ರೋತ್ಸಾಹ ಸಿಕ್ಕುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಮಾಡಿದ ಕಿಚ್ಚ ಸುದೀಪ್ ಅವರು ನೈಜ ರೀತಿಯಲ್ಲಿ ಸಮಾಜಕ್ಕೆ ಅನುಗುಣವಾದ ಕಥಾ ವಸ್ತುವನ್ನು ಅಷ್ಟೇ ಸಹಜವಾಗಿ ಅಭಿವ್ಯಕ್ತ ಮಾಡಿರುವುದರ ಬಗ್ಗೆ ಎಲ್ಲ ಕಲಾವಿದರುಗಳಿಗೆ ಅಭಿನಂದನೆ ತಿಳಿಸಿ ಮುಕ್ತ ಪ್ರಶಂಸೆಯನ್ನು ಮಾಡಿದ್ದರು. ಈ ರೀತಿಯ ಒಳ್ಳೆ ಮಟ್ಟದ ಚಿತ್ರಕ್ಕೆ ಯಶಸ್ಸು ಸಿಕ್ಕಬೇಕು ಬಹುಶಃ ಈ ಚಿತ್ರ ದೊಡ್ಡ ಚಿತ್ರಗಳ ಬಿಡುಗಡೆ ಅಲೆಯಲ್ಲಿ ಸಿಕ್ಕಿ ಕೊಂಡಿರಬೇಕು ಎಂದು ಅಭಿಪ್ರಾಯ ಪಟ್ಟಿದರು ಕಿಚ್ಚ ಸುದೀಪ್
ಅದರಂತೆಯ ನಿರ್ಮಾಪಕರುಗಳಾದ ವಿ ಕೆ. ಮೋಹನ್ ಪ್ರವೀಣ್ ಕುಮಾರ್ ಶೆಟ್ಟಿ ಶಿŅ